Thursday 24 November 2011

ಕರಡಿ ಮತ್ತು ಗೂಳಿ ( Bear and Bull )

ಕರಡಿ ಮತ್ತು ಗೂಳಿ ( Bear and Bull )
ಸಾಮಾನ್ಯವಾಗಿ ನೀವು ಎಲ್ಲಾ ಪತ್ರಿಕೆಗಳಲ್ಲಿ  ಶೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಮತ್ತು ಗೂಳಿ ಜಿಗಿತ ಅಂತ  ಓದಿರುತ್ತೀರಿ.
ಮೊದಲಿಗೆ ಕರಡಿ ಮತ್ತು ಗೂಳಿ ಅಂದರೇನು ಅಂತ ತಿಳಿದುಕೊಳ್ಳೋಣ.

ಕರಡಿ ಮಾರುಕಟ್ಟೆ ಅಂದರೆ ಶೇರು ಮಾರುಕಟ್ಟೆ ಇಂದು ಸೂಚ್ಯಂಕ ಕ್ಕಿಂತ ಕಡಿಮೆ ಹೋಗಿದೆ ಅಥವಾ ಪೂರ ಕೆಳಗಡೆ ಅಥವಾ ಲಾಭಕ್ಕಿಂತ ಕಡಿಮೆ ಆಗಿದೆ ಅಂತ ಅರ್ಥ.

ಗೂಳಿ ಮಾರುಕಟ್ಟೆ ಅಂದರೆ  ಮಾರುಕಟ್ಟೆ ಇಂದು ಸೂಚ್ಯಂಕ ಕ್ಕಿಂತ ಜಾಸ್ತಿ ಹೋಗಿದೆ ಅಥವಾ ಪೂರ ಮೇಲುಗಡೆ  ಅಥವಾ ಸಾಮಾನ್ಯ ಲಾಭಕ್ಕಿಂತ ಹೆಚ್ಚು  ಆಗಿದೆ ಅಂತ ಅರ್ಥ.

ಶೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಮತ್ತು ಗೂಳಿ ಜಿಗಿತ ಎರಡೋ ಇರಬೇಕು. ಹೀಗಾಗಿ ಒಂದೊಂದು ಹಿಂದೆ ಮುಂದೆ ಬರ್ತಾ ಇರುತ್ತವೆ . ಹೂಡಿಕೆದಾರ ಭಯ ಪಡದೆ ಜಾಣತನದಿಂದ ಹೂಡಿಕೆ ಮಾಡಿ ಲಾಭ ಮಾಡಿಕೊಳ್ಳಬೇಕು .

ಮುಂದಿನ ಬಾರಿ ಶೇರು ಮಾರುಕಟ್ಟೆಯಲ್ಲಿ  ಕರಡಿ ಕುಣಿತ ಆದರೆ ಏನು ಮಾಡಬೇಕು ಗೂಳಿ ಜಿಗಿತ ಆದರೆ ಏನು ಮಾಡಬೇಕು
ಅಂತ ಹೇಳುತ್ತೇನೆ .


Tuesday 22 November 2011

ಷೇರು ಸೂಚ್ಯಂಕ

ಷೇರು  ಮಾರುಕಟ್ಟೆಯಲ್ಲಿ ಎರಡು ತರಹದ ಸೂಚ್ಯಂಕ ಸಂವೇದಿಗಳು ಇವೆ.

೧) ನಿಫ್ಟಿ - NIFTY
೨) ಸೆನ್ಸೆಕ್ಸ್ - SENSEX

ನಿಫ್ಟಿ ಯಲ್ಲಿ ೫೦(50) ಕಂಪೆನಿಗಳನ್ನ ಸಂವೇದಿಗಳಾಗಿ ತೆಗೆದುಕೊಂಡರೆ, ಸೆನ್ಸೆಕ್ಸ್ ನಲ್ಲಿ ೩೦ (30)  ಕಂಪೆನಿಗಳನ್ನ ಸಂವೇದಿ ಸೂಚ್ಯಂಕ ಗಳಾಗಿ ತೆಗೆದುಕೊಳ್ಳುತ್ತಾರೆ.